ಎಸ್ಪೋಸ್ಟೊ: ಸುಂದರವಾದ ಒಂದು ಕಳ್ಳಿ ಜಾತಿ, ಪೆರು ಮತ್ತು ಎಕ್ವಡಾರ್ಗಳ ಮೂಲವಾಸಿ. ಪೆರು ದೇಶದ ಸಸ್ಯವಿಜ್ಞಾನಿಯಾದ ನಿಕೊಲಾಸ್ ಎ. ಎಸ್ಪೋಸ್ಟೊ ಎಂಬುವನ ಜ್ಞಾಪಕಾರ್ಥವಾಗಿ ಈ ಹೆಸರು. ಗಿಡದ ಮೇಲೆ ಉಣ್ಣೆಯಂತಿರುವ ಬಿಳಿಯ ಬಣ್ಣದ ನಾರು ಇರುವುದರಿಂದ ಸುಂದರವಾಗಿ ಕಾಣುತ್ತದೆ. ಮನೆಗಳಲ್ಲಿ ಇದನ್ನು ಅಲಂಕಾರ ಸಸ್ಯವಾಗಿ ಬೆಳೆಸುತ್ತಾರೆ. ಬೆಳೆದ ಗಿಡ ಸುಮಾರು 3 ಅಡಿ ಎತ್ತರವಿರುತ್ತದೆ. ಮೇಲು ಭಾಗ 20ರಿಂದ 25 ದಿಣ್ಣೆಗಳಿಂದ ಕೂಡಿದ್ದು ಹಿಮಬಿಳುಪಿನ ನಾರಿನಿಂದ ಆವೃತವಾಗಿದೆ. ಗಂಟುಗಳಲ್ಲಿ ದೃಢವಾದ ಮುಳ್ಳುಗಳಿವೆ. ಚಕ್ರಾಕಾರದ ನಸುಗೆಂಪು ಬಣ್ಣದ ಹೂಗಳು ಪ್ರತಿನಿತ್ಯ ಕಾಣಿಸಿಕೊಳ್ಳುತ್ತವೆ. ಅಂಡಾಶಯ ಬಹು ಸಣ್ಣ ಬಿಲ್ಲೆಗಳಿಂದ ಆವೃತವಾಗಿದ್ದು, ಇವುಗಳ ಕಂಕುಳಲ್ಲಿ ಉದುರಿ ಹೋಗುವ ಬಿಳಿಯ ಬಣ್ಣದ ನಾರುಗಳಿವೆ. ಹೆಚ್ಚು ರಸದಿಂದ ಕೂಡಿರುವ ಬಿಳುಪು ಅಥವಾ ಕೆಂಪು ಬಣ್ಣದ ಹಣ್ಣಿನಲ್ಲಿ ಕಪ್ಪಾದ ಬೀಜಗಳಿವೆ.	(ಬಿ.ಎ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ